ಕಲಾ ಉತ್ಸವವು ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯ ಸಚಿವಾಲಯ ಇಲಾಖೆಯ (MOE), ಒಂದು ಉಪಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಭಾರತ ಸರ್ಕಾರ 2015ರಲ್ಲಿ ಪ್ರಾರಂಭಿಸಿ, ಪ್ರತಿ ವರ್ಷವು ಆಚರಿಸುತ್ತಿದೆ.
ಶಿಕ್ಷಣದಲ್ಲಿ ಕಲೆಯನ್ನು ಉತ್ತೇಜಿಸಿ, ಕಲಾತ್ಮಕತೆಯನ್ನು ಪೋಷಿಸುವ ಮತ್ತು ಪ್ರದರ್ಶಿಸುವ ಮೂಲಕ ಪ್ರೌಢಶಾಲಾ ಮಕ್ಕಳಲ್ಲಿರುವ ಪ್ರತಿಭೆಯನ್ನು ಉತ್ತೇಜಿಸುತ್ತದೆ.
ವಿವಿಧ ಮಧ್ಯಸ್ಥಗಾರ ಮೂಲಕ ಭಾರತದ ಶ್ರೀಮಂತ ಸಾಂಸ್ಕøತಿಕ ಸಂಪ್ರದಾಯಗಳು ಮತ್ತು ಅವುಗಳ ಅಭ್ಯಾಸ ಬಗ್ಗೆ ಜಾಗೃತಿ ಮೂಡಿಸುತ್ತದೆ.ಸಮುದಾಯದ ಸೃಜನಶೀಲ ವಿಸ್ತರಣೆಯನ್ನು ತೋರಿಸುತ್ತದೆ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ದೇಶದ ಸಾಂಸ್ಕøತಿಕ ವೈವಿಧ್ಯತೆಯನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಆಚರಿಸಲು ಅವಕಾಶವನ್ನು ನೀಡುತ್ತದೆ. ವಿದ್ಯಾರ್ಥಿಗಳು ಕಲಾತ್ಮಕ ಪ್ರತಿಭೆಯನ್ನು ಅನ್ವೇಷಿಸಲು, ಅರ್ಥಮಾಡಿಕೊಳ್ಳಲು, ಅಭ್ಯಾಸ ಮಾಡಲು, ವಿಕಸಿಸಲು ಮತ್ತು ಪ್ರದರ್ಶಿಸಲು ಮತ್ತಷ್ಟು ಗುರುತಿಸುವ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ.